ಬೆಂಗಳೂರು, ಫೆಬ್ರವರಿ: ಸಮೂಹ ಸಂಪರ್ಕಕ್ಕೆ ಹೆಸರುವಾಸಿಯಾಗಿರುವ ತೆಲೆಬು ಸಂಸ್ಥೆಯು ಕರ್ನಾಟಕದ ಆಡಳಿತ ವಿಭಾಗಕ್ಕಾಗಿ ಅಭಿವೃದ್ಧಿ ಪಡಿಸಿರುವ ‘ಗ್ರೂಪ್ ಟಾಕ್’ ಅನ್ನು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಿತು.
ಶಿವಮೊಗ್ಗದ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಈ ‘ಗ್ರೂಪ್ ಟಾಕ್’ ಸಾಧನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವರದಿಗಾರರೊಬ್ಬರಿಗೆ ‘ಗ್ರೂಪ್ ಟಾಕ್’ ಸಾಧನ ಬಳಸಿ ಕರೆ ಮಾಡಿದ ದಯಾನಂದ ಅವರು ‘ಹ್ಯಾಪಿ ನ್ಯೂ ಇಯರ್’ ಹೇಳುವ ಮೂಲಕ ‘ಗ್ರೂಪ್ ಟಾಕ್’ಗೆ ಚಾಲನೆ ನೀಡಿದರು. ಈ ಗ್ರೂಪ್ ಟಾಕ್ ವ್ಯವಸ್ಥೆಯಿಂದ ಏಕಕಾಲದಲ್ಲಿ 5000 ಅಧಿಕಾರಿಗಳಿಗೆ ಕರೆ ಮಾಡಿ ಸಂವಹನ ನಡೆಸಬಹುದು.
‘ಗ್ರೂಪ್ ಟಾಕ್’ ಚಾಲನೆ ನೀಡಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ದಯಾನಂದ ಅವರು, ‘ನಾವು ಕೆಲವು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದ ಹಳೆಯ ಪದ್ಧತಿಯನ್ನು ಹೊಸ ತಂತ್ರಜ್ಞಾನವು ಬದಲಾಯಿಸುತ್ತಿವೆ, ಈ ಬದಲಾವಣೆ ಕಾರಣಕ್ಕಾಗಿಯೇ ನಾವು ಶಿವಮೊಗ್ಗದಲ್ಲಿ ಗ್ರೂಪ್ ಟಾಕ್ ಬಿಡುಗಡೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಈ ಕಾನ್ಫರೆನ್ಸ್ ಕಾಲ್ ಸೌಲಭ್ಯದಿಂದ ಏಕಕಾಲಕ್ಕೆ ನಾನು ಎನ್ನ ಪೂರ್ಣ ತಂಡದೊಂದಿಗೆ ಸಂವಹನ ಸಾಧಿಸಬಹುದು. ಕರೆಯಲ್ಲಿರುವ ವ್ಯಕ್ತಿಯ ಕರೆಯನ್ನು ಮ್ಯೂಟ್ ಅಥವಾ ಅನ್ ಮ್ಯೂಟ್ ಮಾಡಬಹುದು. ಏಕಕಾಲಕ್ಕೆ ಹಲವು ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ನನ್ನೊಂದಿಗೆ ಜಿಲ್ಲೆಯ ಎಡಿಸಿ, ತಹಶೀಲ್ದಾರ್, ವ್ಯವಸ್ಥಾಪಕರು, ಗ್ರಾಮ ಲೆಕ್ಕಿಗರು, ಇನ್ನೂ ಸುಮಾರು 400 ಅಧಿಕಾರಿಗಳೊಂದಿಗೆ ನಾನು ಏಕಕಾಲಕ್ಕೆ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ ಎಂದು ಅವರು ಗ್ರೂಪ್ ಟಾಕ್ ಅನ್ನು ಹೊಗಳಿದರು.
ತೆಲುಬು ಸಂಸ್ಥೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಕಲ್ಯಾಣ್ ಯರ್ರಮ್ ಶೆಟ್ಟಿ ಮಾತನಾಡಿ, ಶಿವಮೊಗ್ಗ ಕಂದಾಯ ಇಲಾಖೆಗಾಗಿ ಗ್ರೂಪ್ ಟಾಕ್ ಅಪ್ಲಿಕೇಶನ್ ನಿರ್ಮಿಸುವ ಕೆಲಸದಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರೊಟ್ಟಿಗೆ ಮಾಡಿದ್ದು ಸಂತಸ ತಂದಿದೆ. ಈ ಅಪ್ಲಿಕೇಶನ್ ಬಳಸಿ 10000 ಕ್ಕೂ ಹೆಚ್ಚು ಜನರೊಂದಿಗೆ ಸಂಪರ್ಕ ಸಾಧಿಸಬಹುದು ಅದೂ ಕೇವಲ ಒಂದು ಸ್ಮಾರ್ಟ್ ಫೋನ್ ಬಳಸಿ ಎಂದು ಅವರು ಮಾಹಿತಿ ನೀಡಿದರು.
ಗ್ರೂಪ್ ಟಾಕ್ ಮೂಲಕ ಮಾಡಿದ ಕರೆಗಳು ಪಿಎಸ್ಟಿಎನ್ ಲೈನ್ ತಂತ್ರಜ್ಞಾನದಿಂದಾಗಿ ಕಾನ್ಫರೆನ್ಸ್ (ಗುಂಪು) ಕರೆಗಳು ಬೇಗನೆ ಕನೆಕ್ಟ್ ಆಗಲು ಸಹಕಾರಿಯಾಗುತ್ತವೆ. ಗ್ರೂಪ್ ಟಾಕ್ ತಂತ್ರಾಂಶದಿಂದ ಮಾಡಿದ ಕರೆ ಸ್ವೀಕರಿಸಲು ಇಂಟರ್ನೆಟ್ ಅಥವಾ ಗ್ರೂಪ್ ಟಾಕ್ ಆಪ್ ಆಗಲಿ ಅವಶ್ಯಕತೆ ಇರುವುದಿಲ್ಲ.
ಜಿಲ್ಲಾ ಆಯುಕ್ತ ಕರಿಗೌಡ ಮಾತನಾಡಿ, ‘ಗ್ರೂಪ್ ಟಾಕ್’ ತಂತ್ರಾಂಶವು ಕಂದಾಯ ಇಲಾಖೆಯ ಕಾರ್ಯಗಳು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಕಯವಾಗಲಿದೆ. ಪ್ರಸ್ತುತ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್, ಶಿರಸ್ಥೇಧಾರ್, ಜಿಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳು ಕಾನ್ಫರೆನ್ಸ್ ಕಾಲ್ ಗೆ ಸೇರಿಸಿಕೊಳ್ಳಲಾಗಿದೆ ಎಂದರು.
ಅಧಿಕಾರಿಗಳು ಕೆಲಸ ಮಾಡುವ ರೀತಿಯನ್ನೇ ‘ಗ್ರೂಪ್ ಟಾಕ್ ‘ ತಂತ್ರಾಂಶ ಬದಲಾಯಿಸಿ ಕೆಲಸಕ್ಕೆ ವೇಗ ತಂದುಕೊಡುತ್ತದೆ ಎನ್ನಲಾಗುತ್ತಿದೆ. ಈ ತಂತ್ರಾಂಶವು ಪಿಎಸ್್ಟಿಎನ್ ಅಥವಾ ಸಾಮಾನ್ಯ ಫೋನ್ ಅನ್ನು ಬಳಸಿ ಕಾರ್ಯನಿರ್ವಹಿಸುತ್ತದೆ. ಅಧಿಕಾರಿಗಳು ಕೆಲಸದ ನಿಮಿತ್ತ ಹಳ್ಳಿಗಳಿಗೆ ಓಡಾಡಬೇಕಾಗುತ್ತದೆ ಆಗೆಲ್ಲ ಅವರಿಗೆ ಸಂಪರ್ಕವೇ ದೊಡ್ಡ ಸಮಸ್ಯೆ ಆಗಿರುತ್ತದೆ. ಆದರೆ ‘ಗ್ರೂಪ್ ಟಾಕ್’ ತಂತ್ರಾಂಶವು ಕಡಿಮೆ ನೆಟ್ ವರ್ಕ್ ಇದ್ದರೂ ಸಹ ಕಾರ್ಯ ನಿರ್ವಹಿಸುತ್ತದೆ. ಯಾವುದೇ ಸ್ಥಳದಿಂದ, ಪ್ರಯಾಣದಲ್ಲಿದ್ದಾಗಲೂ ಸಹ ಕರೆಗಳನ್ನು ಮಾಡಬಹುದು ಮತ್ತು ರಿಸೀವ್ ಮಾಡಬಹುದಾಗಿದೆ.
ಮುಂಚೆ ಅಧಿಕಾರಿಯೊಬ್ಬರು ತಹಿಶೀಲ್ದಾರ್, ವ್ಯವಸ್ಥಾಪಕ, ಗ್ರಾಮ ಲೆಕ್ಕಿಗ ಹೀಗೆ ಎಲ್ಲರಿಗೂ ಪ್ರತ್ಯೇಕವಾಗಿ ಕರೆ ಮಾಡಿ ಮಾಹಿತಿ ನೀಡುವುದು ಅಥವಾ ಮಾಹಿತಿ ಪಡೆದುಕೊಳ್ಳಬೇಕಾಗಿತ್ತು. ಇದು ಬಹಳ ಖರ್ಚಿನ ಬಾಬತ್ತಾಗಿತ್ತು. ಅಷ್ಟೆ ಅಲ್ಲದೆ ಇದರಿಂದ ಗಂಟೆಗಟ್ಟಲೆ ಸಮಯವನ್ನು ವ್ಯಯ ಆಗುತ್ತಿತ್ತು. ಆದರೆ ಗ್ರೂಪ್ ಟಾಕ್ ತಂತ್ರಾಂಶ ಇದಕ್ಕೆಲ್ಲಾ ಇತಿಶ್ರೀ ಹಾಡಿದೆ. ಒಂದೇ ಬಾರಿಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು ಅದೂ ಸಹ ಬಹು ಕಡಿಮೆ ಖರ್ಚಿನಲ್ಲಿ. ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ: www.telebu.com
ತೆಲುಬು ಸಂಸ್ಥೆಯ ಬಗ್ಗೆ:
ತೆಲುಬು ಸಂಸ್ಥೆಯು 15 ವರ್ಷಗಳಿಂದ ಸಂವಹನ ಉದ್ಯಮದಲ್ಲಿ ನೂತನ ತಂತ್ರಾಂಶಗಳನ್ನು ಆವಿಷ್ಕಾರ ಮಾಡುತ್ತಲೇ ಬರುತ್ತಿದೆ. ಸಂಸ್ಥೆಯು ಸಿದ್ಧ ಸಂವಹನ ಸಾಧನೆ ಅಥವಾ ತಂತ್ರಾಂಶಗಳ ಜೊತೆಗೆ ಇತರ ಸಂಸ್ಥೆಗಳ ಅವಶ್ಯಕತೆಗನುಸಾರವಾಗಿ ಅವರ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ಮಾದರಿಯಲ್ಲಿ ಸಂವಹನ ತಂತ್ರಾಂಶಗಳನ್ನು ನಿರ್ಮಿಸಿಕೊಡುತ್ತಿದೆ.
ತೆಲುಬು ಸಂಸ್ಥೆಯು ಖಾಸಗಿ, ಸಾರ್ವಜನಿಕ ಮತ್ತು ಸರ್ಕಾರಿ ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತದೆ. ತೆಲುಬು ಸಂಸ್ಥೆಯು ಪ್ರಸ್ತುತ ಭಾರತ, ಸೌದಿ ಅರೆಬಿಯಾ, ಬೆಹ್ರೇನ್, ಕತಾರ್, ಯುಎಇ, ಒಮನ್, ಹಾಂಕಾಂಗ್ ಸೇರಿ 15 ವಿವಿಧ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ತೆಲುಬು ಸಂಸ್ಥೆಯ ಕೆಲವು ಸಂವಹನ ತಂತ್ರಾಂಶಗಳು ಇಲ್ಲಿವೆ…
ಎಸ್ಎಂಎಸ್ ಕಂಟ್ರಿ: ಗುಂಪು ಅಕ್ಷರ ಸಂದೇಶ ಮತ್ತು ಧ್ವನಿ ಸಂದೇಶ ಕಳಿಸುವ ಅಪ್ಲಿಕೇಶನ್, ಗ್ರೂಪ್ ಟಾಕ್: ಮೊಬೈಲ್ ಬಳಸಿ ಬ್ರಹುತ್ ಕಾನ್ಫರೆನ್ಸ್ ಕಾಲ್ ಮಾಡುವ ತಂತ್ರಾಂಶ. ಪ್ರೆಸ್3: ಕಾಲ್ ಸೆಂಟರ್ ತಂತ್ರಾಂಶ. ಸಿರೇನ್ ಬಟನ್: ತುರ್ತು ಸಂದೇಶ ರವಾನೆ ವ್ಯವಸ್ಥೆ. ಡಬ್ಲುಎವಿಎನ್ಐ: ಎಪಿಐ ಆಧಾರಿತ ಸಂವಹನ ವೇದಿಕೆ.
ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ: www.telebu.com
Leave a Reply